Wednesday, March 28, 2012

ಅಂಶ / ಅವತಾರ - ೧ (ಮಹಾಭಾರತದ ಪಾತ್ರಗಳು)

ಶ್ರೀಕೃಷ್ಣ - ವಿಷ್ಣು
ರುಕ್ಮಿಣೀ - ಲಕ್ಷ್ಮೀ

ಭೀಷ್ಮಾಚಾರ್ಯ - "ದ್ಯು" ನಾಮಕ ವಸು
ದ್ರೋಣಾಚಾರ್ಯ - ಬೃಹಸ್ಪತಿ
ಕೃಪಾಚಾರ್ಯ - ವಿಷ್ಕಂಬ (ಏಕಾದಶ ರುದ್ರರಲ್ಲಿ ಒಬ್ಬ)
ಅಶ್ವತ್ಥಾಮಾಚಾರ್ಯ - ರುದ್ರ ದೇವರು

ಪಾಂಡವರು :
ಧರ್ಮರಾಯ - ಯಮ
ಭೀಮಸೇನ - ಮುಖ್ಯ ಪ್ರಾಣ
ಅರ್ಜುನ - ಇಂದ್ರ
ನಕುಲ - ನಾಸತ್ಯ
ಸಹದೇವ - ದಸ್ರ
ದ್ರೌಪದೀ - ಭಾರತಿ ದೇವಿ

ಉಪಪಾಂಡವರು:
ಪ್ರತಿವಿಂಧ್ಯ (ಯುಧಿಷ್ಥಿರ ಪುತ್ರ) - ಪುರೂರವ ವಸು
ಶೃತಸೋಮ (ಭೀಮ ಪುತ್ರ) - ಆರ್ದ್ರವ ವಸು
ಶೃತಕೀರ್ತಿ (ಅರ್ಜುನ ಪುತ್ರ) - ಧೂ ವಸು
ಶತಾನೀಕ (ನಕುಲ ಪುತ್ರ) - ಲೋಚನ ವಸು
ಶೃತಕರ್ಮಾ (ಸಹದೇವ ಪುತ್ರ) - ಕ್ರತು ವಸು

ಅಭಿಮನ್ಯು - ಬುಧ
ಚಾರುದೇಷ್ಣ - ಗಣಪತಿ

ಧೃತರಾಷ್ಟ್ರ - ಧೃತರಾಷ್ಟ್ರ ನಾಮಕ ಗಂಧರ್ವ
ಪಾಂಡು ರಾಜ - ಪರಾವಹ ಮರುತ್
ಕುಂತೀ - ಪರಾವಹ ಮರುತ್ ಪತ್ನೀ

"ಅಭಿಮಾನಿ" ಹಾಗು "ನಿಯಾಮಕ" ಪದಗಳ ವ್ಯತ್ಯಾಸ

ನಮಗೆ ಎರಡೂ ಪದಗಳ ಪರಿಚಯ ಬಹಳಷ್ಟುಇದೆ.
ಆದರೆ ಅವುಗಳ ಅರ್ಥದಲ್ಲಿ ಗೊಂದಲವೂ ಇದ್ದೇ ಇದೆ.

ಬನ್ನಿ ಎರಡು ಪದಗಳ ಅರ್ಥ ತಿಳಿಯಲು ಸ್ವಲ್ಪ ಪ್ರಯತ್ನಿಸೋಣ.

ಒಂದು ವಸ್ತುವು ಒಬ್ಬ ವ್ಯಕ್ತಿಯ ಹತೋಟಿಯಲ್ಲಿದ್ದು, ವ್ಯಕ್ತಿಯು ಮತ್ತೊಬ್ಬರ ಹತೋಟಿಯಲ್ಲಿದ್ದರೆ, ಅಂತಹ ವ್ಯಕ್ತಿಯನ್ನು ವಸ್ತುವಿಗೆ "ಅಭಿಮಾನಿ" ಎಂದು ಕರೆಯಬಹುದು.

ಒಂದು
ವಸ್ತುವನ್ನು ತನ್ನ ಹತೋಟಿಯಲ್ಲಿಟ್ಟುಕೊಂಡು, ವ್ಯಕ್ತಿಯು ಮತ್ತಾರ ಹತೋಟಿಯಲ್ಲೂ ಇಲ್ಲದಿದ್ದರೆ ಅಂತಹ ವ್ಯಕ್ತಿಯನ್ನು "ನಿಯಾಮಕ" ಎಂದು ಕರೆಯಬಹುದು.

ಇದಕ್ಕೆ ಲೌಕಿಕ ಉದಾಹರಣೆ ನೋಡುವುದಾದರೆ.
ನಮ್ಮ ಮನೆಗಳಿಗೆ ಹಾಲಿನ ತೊಟ್ಟೆ (Packet) ಹಾಕುವವನು "ಅಭಿಮಾನಿ" ಹಾಗು ಹಾಲು ಉತ್ಪಾದನಾ ಸಂಘದ ಮಾಲೀಕ "ನಿಯಾಮಕ"
ಹಾಲಿನ ತೊಟ್ಟೆಯು, ಅದನ್ನು ನಮ್ಮ ಮನೆಗಳಿಗೆ ತಲುಪಿಸುವವನ ಆಧೀನದಲ್ಲಿದ್ದರೂ ಅವನು ತನ್ನ ಮೇಲಧಿಕಾರಿಯ ಆಧೀನ ಹಾಗಾಗಿ ಅವನು ತೊಟ್ಟೆಗೆ "ಅಭಿಮಾನಿ" ಮಾತ್ರ.
ಆದರೆ ಸಂಘದ ಮಾಲೀಕ "ನಿಯಾಮಕ" ಏಕೆಂದರೆ ಹಾಲಿನ ತೊಟ್ಟೆಯೂ ಅವನ ಆಧೀನ ಹಾಗು ತೊಟ್ಟೆಯನ್ನು ಮನೆ ಮನೆಗೆ ಹಾಕುವ ವ್ಯಕ್ತಿಯೂ ಅವನ ಆಧೀನ.





Saturday, March 24, 2012

ಮಧ್ವ ಪರಂಪರೆ

ಜಗದ್ಗುರು ಶ್ರಿಮನ್ಮಧ್ವಾಚಾರ್ಯರು ಉಡುಪಿಯಲ್ಲಿ ರುಕ್ಮಿಣಿ ಕರಾರ್ಚಿತ ಶ್ರೀಕೃಷ್ಣನ ವಿಗ್ರಹವನ್ನು ಪ್ರತಿಷ್ಠಾಪಿಸಿ,
ಎಂಟು ಮಂದಿ ಬಾಲ ವಟುಗಳಿಗೆ ಸನ್ಯಾಸಾಶ್ರಮವನ್ನು ನೀಡಿ ಶ್ರೀಕೃಷ್ಣನ ಪೂಜಾ ಕೈಂಕರ್ಯವನ್ನು ಒಪ್ಪಿಸಿದರು.

ಎಂಟು ಯತಿಗಳ ಹೆಸರು ಇಂತಿವೆ :
ಶ್ರೀ ಹೃಷೀಕೇಶ ತೀರ್ಥರು , ಶ್ರೀ ನರಸಿಂಹ ತೀರ್ಥರು, ಶ್ರೀ ಜನಾರ್ದನ ತೀರ್ಥರು, ಶ್ರೀ ಉಪೇಂದ್ರ ತೀರ್ಥರು, ಶ್ರೀ ವಾಮನ ತೀರ್ಥರು, ಶ್ರೀ ವಿಷ್ಣು ತೀರ್ಥರು, ಶ್ರೀ ರಾಮ ತೀರ್ಥರು, ಹಾಗೂ ಶ್ರೀ ಅಧೋಕ್ಷಜ ತೀರ್ಥರು.
ಇವರುಗಳಿಂದ ಮುಂದುವರೆದ ಪರಂಪರೆಯೇ ಇಂದಿನ ಉಡುಪಿಯ ಅಷ್ಠ ಮಠಗಳು. ಅವುಗಳ ಹೆಸರು ಶ್ರೀ ಪಲಿಮಾರು ಮಠ, ಶ್ರೀ ಅದಮಾರು ಮಠ, ಶ್ರೀ ಕೃಷ್ಣಾಪುರ ಮಠ, ಶ್ರೀ ಪುತ್ತಿಗೆ ಮಠ, ಶ್ರೀ ಶಿರೂರು ಮಠ, ಶ್ರೀ ಕುಂಭಾಸಿ ಮಠ (ಶ್ರೀ ಸೋಂದಾ ಮಠ), ಶ್ರೀ ಕಾಣಿಯೂರು ಮಠ ಹಾಗು ಶ್ರೀ ಪೇಜಾವರ ಮಠ.

ಒಮ್ಮೆ ಶ್ರೀ ಮಧ್ವರು ಗೋದಾವರಿ ತೀರದಲ್ಲಿ ಸಂಚರಿಸುತ್ತಿದ್ದಾಗ, "ಶೋಭನ ಭಟ್ಟ"ರೆಂಬ ಪ್ರಖ್ಯಾತ ಅದ್ವೈತ ಪಂಡಿತರು ಅವರಿಂದ ವಾದದಲ್ಲಿ ಪರಾಜಿತರಾಗಿ ಮುಂದೆ ಅವರಿಂದಲೇ ಸನ್ಯಾಸಾಶ್ರಮವನ್ನು ಸ್ವೀಕರಿಸಿದರು. ಅವರೇ ಶ್ರೀ "ಪದ್ಮನಾಭ ತೀರ್ಥ"ರು.
ಮಧ್ವರು ಇವರಿಗೆ ಮಧ್ವ ಮತ ಪ್ರಸಾರದ ಹೊಣೆಗಾರಿಕೆಯನ್ನು ನೀಡಿದರು.
ಇವರ ಹೆಸರು ಸ್ಕಂದ ಪುರಾಣದಲ್ಲಿ ಉಲ್ಲೇಖಿಸಲ್ಪಟ್ಟಿದೆ. ಇವರು ಮಧ್ವರ ಗ್ರಂಥಗಳಿಗೆ ಟೀಕೆಯನ್ನು ರಚಿಸಿದ ಮೊದಲ ಯತಿಗಳೂ ಹೌದು. ಹಾಗಾಗಿ ಇವರು "ಅದ್ಯ ಟೀಕಾಚಾರ್ಯ"ರೆಂದು ಪ್ರಖ್ಯಾತರಾಗಿದ್ದಾರೆ.

ಶ್ರೀ ಪದ್ಮನಾಭ ತೀರ್ಥರ ನಂತರ ಶ್ರೀ ನರಹರಿ ತೀರ್ಥರು, ಶ್ರೀ ಮಾಧವ ತೀರ್ಥರು, ಹಾಗೂ ಶ್ರೀ ಅಕ್ಷೋಭ್ಯ ತೀರ್ಥರು ಜಗದ್ಗುರು ಶ್ರೀ ಮಧ್ವರ ಸರ್ವಜ್ಞ ಪೀಠವನ್ನು ಅಲಂಕರಿಸಿದರು. ಮೂವರೂ ಶ್ರೀ ಮಧ್ವರಿಂದಲೇ ಸನ್ಯಾಸಾಶ್ರಮವನ್ನು ಸ್ವೀಕರಿಸಿದರು ಎಂಬ ಬಲವಾದ ನಂಬಿಕೆ ಇದೆಯಾದರೂ ಸಾಕಷ್ಟು ಪುರಾವೆಗಳು ಸಿಗುವುದಿಲ್ಲ.

ಶ್ರೀ ಪದ್ಮನಾಭ ತೀರ್ಥರು ಮಧ್ವ ಮತ ಪ್ರಸಾರಕ್ಕಾಗಿ ಒಂದು ಪ್ರತ್ಯೇಕ ಪರಂಪರೆಯನ್ನೇ ಪ್ರಾರಂಭಿಸಿದರು. ಅದುವೇ ಇಂದಿನ ಶ್ರೀ ಶ್ರೀಪಾದರಾಜ ಮಠ ಅಥವಾ ಶ್ರೀ ಮುಳುಬಾಗಿಲು ಮಠ.

ಅವರ ನಂತರ ಸರ್ವಜ್ಞ ಪೀಠವನ್ನಲಂಕರಿಸಿದ ಶ್ರೀ ನರಹರಿತೀರ್ಥರೂ ಒಂದು ಪ್ರತ್ಯೇಕ ಪರಂಪರೆಯನ್ನು ಪ್ರಾರಂಭಿಸಿದರು. ಇದಕ್ಕೆ ಪುರಾವೆ ಶ್ರೀ ಮುಷ್ಣದ ಶಾಸನ ಒಂದರಲ್ಲಿ "ಶ್ರೀ ನರಹರಿ ತೀರ್ಥ ಮಠದ ಜಗನ್ನಾಥ ತೀರ್ಥರು" ಎಂಬ ಉಲ್ಲೇಖ.
ಪರಂಪರೆಯು ಯಾವಾಗ ಲೀನವಾಯಿತು. ಪರಂಪರೆಯಲ್ಲಿ ಎಷ್ಟು ಮಂದಿ ಯತಿಗಳು ಆಗಿ ಹೋದರು ಎಂಬ ಯಾವುದೇ ಮಾಹಿತಿ ನಮಗೆ ಸಿಗದಿರುವುದು ದುರದೃಷ್ಟಕರ. ( ಮಾಹಿತಿಯನ್ನು ನಾನು ಯಾವ ಪುಸ್ತಕದಲ್ಲಿ ಓದಿದೆಯೆಂಬ ವಿಷಯ ಬ್ಲಾಗ್ ಬರೆಯುವ ಸಂದರ್ಭದಲ್ಲಿ ನೆನಪಿಗೆ ಬರುತ್ತಿಲ್ಲ. ಅತಿ ಶೀಘ್ರದಲ್ಲಿಯೇ ಮಾಹಿತಿಯನ್ನು ಒದಗಿಸಲು ಪ್ರಯತ್ನಿಸುತ್ತೇನೆ). ಬಹುಶಃ ಪರಂಪರೆಯು ಉತ್ತರ ಭಾರತದಲ್ಲೆಲ್ಲೋ ಅಜ್ಞಾತವಾಗಿದ್ದು ಯಾವುದೇ ಹರಿದಾಸರಿಂದಲೂ ಉಳ್ಲೀಖಿಸಲ್ಪಟ್ಟಿಲ್ಲವೆಂದು ಊಹಿಸಬಹುದಷ್ಟೆ!

ಶ್ರೀ ನರಹರಿ ತೀರ್ಥರ ನಂತರ ಸರ್ವಜ್ಞ ಪೀಠದಲ್ಲಿ ವಿರಾಜಮಾನರಾದ ಶ್ರೀ ಮಾಧವ ತೀರ್ಥರೂ ಮಧ್ವ ಮತದ ಪ್ರಸಾರಣದ ಸಲುವಾಗಿ ತಮ್ಮದೆಯಾದ ಪರಂಪರೆಯೊಂದನ್ನು ಪ್ರಾರಂಭಿಸಿದರು. ಅದುವೇ ಇಂದು ಶ್ರೀ ಮಜ್ಜಿಗೆಹಳ್ಳಿ ಮಠ ಅಥವಾ ಶ್ರೀ ತಂಬೆ ಹಳ್ಳಿ ಮಠ ಎಂದು ಪ್ರಸಿದ್ಧವಾಗಿದೆ.

ಶ್ರೀ ಮಾಧವ ತೀರ್ಥರ ನಂತರದವರಾದ ಶ್ರೀ ಅಕ್ಷೋಭ್ಯ ತೀರ್ಥರೂ ಒಂದು ಪ್ರತ್ಯೇಕ ಪರಂಪರೆಯನ್ನು ಪ್ರಾರಂಭಿಸಿದರು. ಅದು ಮುಂದೆ ಶ್ರೀ ಲೋಕವಂದಿತ ತೀರ್ಥರ ಕಾಲದಲ್ಲಿ ಕವಲೊಡೆದು ಕೂಡ್ಲಿ ಅಕ್ಷೋಭ್ಯ ತೀರ್ಥ ಮಠ ಹಾಗು ಬಾಳೆಗಾರು ಅಕ್ಷೋಭ್ಯ ತೀರ್ಥ ಮಠ ಎಂದು ಪ್ರಸಿದ್ಧಿಗೆ ಬಂತು.

ಶ್ರೀ ಅಕ್ಷೋಭ್ಯ ತೀರ್ಥರ ನಂತರ ಸರ್ವಜ್ಞ ಪೀಠ ಆರೋಹಣ ಮಾಡಿದವರು ಶ್ರೀ ಜಯತೀರ್ಥರು.
ಅವರ ನಂತರ ಬಂದ ಶ್ರೀ ವಿದ್ಯಾಧಿರಾಜರ ಕಾಲದಲ್ಲಿ ಆದಿ ಮಠವು ಮೊದಲ ಬಾರಿಗೆ ಕವಲೊಡೆಯಿತು.

ಶ್ರೀ ವಿದ್ಯಾಧಿರಾಜರ ಶಿಷ್ಯರಾದ ಶ್ರೀ ರಾಜೇಂದ್ರ ತೀರ್ಥರಿಂದ ಮುಂದುವರೆದ ಪರಂಪರೆಯೇ ಶ್ರೀ ಪೂರ್ವಾದಿ ಮಠ. ಅದೇ ಪರಂಪರೆಯಲ್ಲಿ ಮುಂದೆ ಬಂದ ಪ್ರಹ್ಲಾದಾವತಾರರಾದ ಶ್ರೀ ವ್ಯಸರಾಜರಿಂದಾಗಿ ಮಠವು "ಶ್ರೀ ವ್ಯಾಸರಾಜ ಮಠ" ಎಂದು ಪ್ರಸಿದ್ಧಿಗೆ ಬಂತು.
ಶ್ರೀ ವಿದ್ಯಾಧಿರಾಜರ ಮತ್ತೋರ್ವ ಶಿಷ್ಯರಾದ ಶ್ರೀ ಕವೀಂದ್ರ ತೀರ್ಥರಿಂದ ಮುಂದುವರೆದ ಪರಂಪರೆಯು ವಿಬುಧೆಂದ್ರ ಮಠ, ವಿಜಯೀಂದ್ರ ಮಠ ಇತ್ಯಾದಿ ನಾಮಧೇಯಗಳಿಂದ ಪ್ರಸಿದ್ಧಿ ಹೊಂದಿ ಪ್ರಹ್ಲಾದಾವತಾರರಾದ ಶ್ರೀ ರಾಘವೇಂದ್ರ ತೀರ್ಥರಿಂದಾಗಿ
ಪ್ರಸ್ತುತ "ಶ್ರೀ ರಾಘವೇಂದ್ರ ತೀರ್ಥ ಮಠ" ಎಂದು ಪ್ರಸಿದ್ಧವಾಗಿದೆ.














will be updated with more details shortly . . . . . . . . . .

ನಂದನ ಸಂವತ್ಸರದ ಚಾತುರ್ಮಾಸ್ಯ ಸಂಕಲ್ಪವನ್ನು ಬೆಂಗಳೂರಿನಲ್ಲಿ ಕೈಗೊಳ್ಳಲಿರುವ ಯತಿಗಳು

(ಸಧ್ಯಕ್ಕೆಲಭ್ಯವಾಗಿರುವ ಮಾಹಿತಿಯಂತೆ)

೧. ಪರಮಪೂಜ್ಯ ಶ್ರೀ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು (ಶ್ರೀ ಕಾಣಿಯೂರು ಮಠ)
ಸ್ಥಳ : ಶ್ರೀ ಕಾಣಿಯೂರು ಮಠ, ತ್ಯಾಗರಾಜನಗರ

೨. ಪರಮಪೂಜ್ಯ ಶ್ರೀ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದರು (ಶ್ರೀ ಉತ್ತರಾದಿ ಮಠ)
ಸ್ಥಳ : ಶ್ರೀ ಉತ್ತರಾದಿ ಮಠ, ಬಸವನಗುಡಿ

ತಿಳಿದಷ್ಟು ಪೇಳುವೆ ಮಧ್ವರ ಕಥೆ - ೧

ಕಲಿಕಾಲದ ಪ್ರಭಾವದಿಂದಾಗಿ "ಜ್ನಾನಸೂರ್ಯ" ಅಸ್ತಮಿಸಲು ಪ್ರಾರಂಭಿಸಿದ.
ಜಗತ್ತಿನಲ್ಲೆಲ್ಲಾ ತತ್ವವಿಲ್ಪವವುಂತಾಯಿತು.
ಹರಿಸರ್ವೂತಮತ್ವವನು ಅಲ್ಲಗೆಳೆಯುವವರು ಕೆಲವರು. ಹರಿಯೂ ಹರನೂ ಒಂದೇ ಎನ್ನುವವರು ಕೆಲವರು. ಹರನೇ ಸರ್ವೋತ್ತಮ ಎಂಬುವವರು ಕೆಲವರು. ನಾನೂ ದೇವರೂ ಒಂದೇ ಎನ್ನುವವರು ಕೆಲವರು. ಕೆಲವೊಮ್ಮೆ ನಾನೂ ದೇವರೂ ಒಂದೆ ಕೆಲವೊಮ್ಮೆ ಬೇರೆ ಬೇರೆ ಎನ್ನುವವರು ಕೆಲವರು, ಹೀಗೇ . . .
ಇದರ ಪ್ರಭಾವದಿಂದಾಗಿ ಸಜ್ಜನರು ಸನ್ಮಾರ್ಗವನ್ನು ಬಿಟ್ಟು ದುರ್ಮಾರ್ಗಿಗಳಾಗಲು ಪ್ರಾರಂಭಿಸಿದರು.
ಸಜ್ಜನರ ಪರಿಸ್ಥಿತಿಯನ್ನು ಕಂಡು ವ್ಯಥೆಗೊಂಡ ದೇವತೆಗಳು ಕ್ಷೀರಸಾಗರದತ್ತ ಹೊರಟರು.
ತಮ್ಮ ಅಳಲನ್ನು ಭಗವಂತನ ಬಳಿ ನಿವೇದಿಸಿಕೊಂಡರು.

ಭಗವಂತ ತ್ರಿಯುಗ. ಆತ ಮೂರೂ ಯುಗಗಳಲ್ಲಿ ಮಾತ್ರ ಅವತಾರ ಮಾಡುವವನು.
ಹಾಗಾಗಿ ಸಜ್ಜನರ ಉದ್ಧಾರಕ್ಕಾಗಿ ತಾನು ಅವತರಿಸಲಿಚ್ಚಿಸಲಿಲ್ಲ.
ಇನ್ನು ಚತುರ್ಮುಖನಿಗಂತು ಭೂಲೋಕದಲ್ಲಿ ಅವತಾರವೇ ಇಲ್ಲ. ಹಾಗಾಗಿ ಅವನನ್ನೂ ಅಜ್ಞಾಪಿಸಲಿಲ್ಲ.

ಮತ್ತೊಂದು ಯೋಚಿಸದೆ ಶ್ರೀ ಹರಿಯು, ವಹಿಸಿಕೊಟ್ಟ ಕಾರ್ಯವನ್ನು ಚೆನ್ನಾಗಿ ಮಾಡುವವನೂ, ಸರ್ವಜ್ನನೂ ಆದ
ಶ್ರೀಮುಖ್ಯಪ್ರಾಣನನ್ನು ಸಜ್ಜನರ ಉದ್ಧಾರಕ್ಕಾಗಿ ಭೂಲೋಕದಲ್ಲಿ ಅವತರಿಸುವಂತೆ ಆಜ್ಞಾಪಿಸಿದ.

ಹೀಗೆ ತನ್ನ ಸ್ವಾಮಿಯಾದ ಶ್ರೀ ಹರಿಯಿಂದ ಆಜ್ಞಪ್ತನೂ ಇತರ ದೇವತೆಗಳಿಂದ ಪ್ರಾರ್ಥಿತನೂ ಆದ ಶ್ರೀ ಮುಖ್ಯಪ್ರಾಣನು ಭೂಲೋಕದಲ್ಲಿ ಮಧ್ವಾಚರ್ಯರಾಗಿ ಅವತರಿಸಿದ.

ಕಥಾ ಭಾಗವನ್ನು ಓದುವುದರಿಂದ ಅತಿ ಶೀಘ್ರದಲ್ಲಿಯೇ ನಮ್ಮೆಲ್ಲರ ಹೃದಯದಲ್ಲಿ ಮುಖ್ಯಪ್ರಾಣನು ಅವತರಿಸಿ ನಮ್ಮೆಲ್ಲರ ಕಲಿಮಲಕಲುಷವನ್ನು ಪರಿಹರಿಸುತ್ತಾನೆ.
(ಮುಂದುವರೆಯಲಿದೆ . . . )

ಪ್ರಸ್ತುತ ಅಷ್ಟ ಮಠದ ಯತಿಗಳು

ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದಂಗಳವರು
(ಶ್ರೀ ಪಲಿಮಾರು ಮಠ)


ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದಂಗಳವರು
(ಶ್ರೀ ಅದಮಾರು ಮಠ)


ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದಂಗಳವರು
(ಶ್ರೀ ಕೃಷ್ಣಾಪುರ ಮಠ)


ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದಂಗಳವರು
(ಶ್ರೀ ಪುತ್ತಿಗೆ ಮಠ)
ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದಂಗಳವರು
(ಶ್ರೀ ಶಿರೂರು ಮಠ)

ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದಂಗಳವರು
(ಪರ್ಯಾಯ ಶ್ರೀ ಸೋಂದಾ ಮಠ)
ಶ್ರೀ ವಿದ್ಯಾವಲ್ಲಭಾತೀರ್ಥ ಶ್ರೀಪಾದಂಗಳವರು (ಭಾವೀ ಪರ್ಯಾಯ ಪೀಠಾಧೀಶರು )
(ಶ್ರೀ ಕಾಣಿಯೂರು ಮಠ)
ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರು ಹಾಗು
ಶ್ರೀ ವಿಸ್ವಪ್ರಸನ್ನತೀರ್ಥ ಶ್ರೀಪಾದಂಗಳವರು (ಕಿರಿಯ ಪಟ್ಟ)
(ಶ್ರೀ ಪೇಜಾವರ ಮಠ)

ಮಾಧ್ವ ಮಠಗಳು

ಜಗದ್ಗುರು ಶ್ರೀಮನ್ಮಧ್ವಾಚಾರ್ಯರು ಉಡುಪಿಯಲ್ಲಿ ರುಕ್ಮಿಣೀ ಕರಾರ್ಚಿತ ಬಾಲ ಕೃಷ್ಣನ ವಿಗ್ರಹವನ್ನು ಪ್ರತಿಷ್ಠಾಪಿಸಿ,
ಶ್ರೀಕೃಷ್ಣನ ಪೂಜೆಯನ್ನು ಅವಿಚ್ಛಿನ್ನವಾಗಿ ನಡೆಸಲು ಎಂಟು ಮಂದಿ ಬಾಲವಟುಗಳಿಗೆ ಸನ್ಯಾಸಾಶ್ರಮ ನೀಡಿದರು.
ಎಂಟು ಮಂದಿಯಿಂದ ಮುಂದುವರೆದ ಪರಂಪರೆಯೇ ಇಂದು ಅಷ್ಟ ಮಠಗಳು ಎಂದು ಪ್ರಸಿದ್ಧಿ ಹೊಂದಿವೆ. ಅವು:

೧. ಶ್ರೀ ಪಲಿಮಾರು ಮಠ
೨. ಶ್ರೀ ಅದಮಾರು ಮಠ
೩. ಶ್ರೀ ಕೃಷ್ಣಾಪುರ ಮಠ
೪. ಶ್ರೀ ಪುತ್ತಿಗೆ ಮಠ
೫. ಶ್ರೀ ಶೀರೂರು ಮಠ
೬. ಶ್ರೀ ಸೋಂದ ಮಠ
೭. ಶ್ರೀ ಕಾಣಿಯೂರು ಮಠ
೮. ಶ್ರೀ ಪೇಜಾವರ ಮಠ

ಶ್ರೀ ಮಧ್ವಾಚಾರ್ಯ ಆಶ್ರಮ ಗುರುಗಳಾದ ಶ್ರೀ ಅಚ್ಯುತಪ್ರೇಕ್ಷಾಚಾರ್ಯರಿಂದ ಸನ್ಯಾಸಾಶ್ರಮ ಸ್ವೀಕರಿಸಿ ಮಧ್ವ ಮತಾನುಯಾಯಿಗಳಾದ ಶ್ರಿಸತ್ಯತೀರ್ಥರಿಂದ ಮುಂದುವರೆದ ಪರಂಪರೆ :

೧. ಶ್ರೀ ಭಂಡಾರಕೇರಿ ಮಠ
೨. ಶ್ರೀ ಭೀಮನಕಟ್ಟೆ ಮಠ

ಇನ್ನು ಶ್ರೀಮಧ್ವರು ದ್ವೈತ ಮತ ಪ್ರಸಾರಕ್ಕಾಗಿ ಸನ್ಯಾಸಾಶ್ರಮ ನೀಡಿದ ಶ್ರೀ ಪದ್ಮನಾಭತೀರ್ಥರಿಂದ ಮುಂದುವರೆದ ಪರಂಪರೆಯಿಂದ ಮುಂದುವರೆದ ಪರಂಪರೆ :

೧. ಶ್ರೀ ಶ್ರೀಪಾದರಾಜ ಮಠ
೨. ಶ್ರೀ ಸೋಸಲೆ ವ್ಯಾಸರಾಜ ಮಠ
೩. ಶ್ರೀ ಮಧವತೀರ್ಥ ಮಠ (ಮಜ್ಜಿಗೆಹಳ್ಳಿ ಮಠ / ತಂಬಿಹಳ್ಳಿ ಮಠ )
೪. ಶ್ರೀ ಕೂಡ್ಲಿ ಆರ್ಯ ಅಕ್ಷೋಭ್ಯತೀರ್ಥ ಮಠ
೫. ಶ್ರೀ ಬಾಳಗಾರು ಆರ್ಯ ಅಕ್ಶೋಭ್ಯತೀರ್ಥ ಮಠ
೮. ಶ್ರೀ ರಾಘವೇಂದ್ರ ಮಠ
೯. ಶ್ರೀ ಉತ್ತರಾದಿ ಮಠ
೧೦. ಶ್ರೀ ಕುಂದಾಪುರ ವ್ಯಾಸರಾಜ ಮಠ

ಕವಲೊಡೆದು ನಿರ್ಮಿತವಾದ ಇನ್ನಿತರ ಮಾಧ್ವ ಮಠಗಳು

೧. ಶ್ರೀ ಸುಬ್ರಹ್ಮಣ್ಯ ಮಠ (ಕುಕ್ಕೆ)
2. ಶ್ರೀ ಪೇಜಾವರ ಮಠದಿಂದ - ಶ್ರೀ ಚಿತ್ರಾಪುರ ಮಠ
3. ಶ್ರೀ ಕಾಣಿಯೂರು ಮಠದಿಂದ - ಶ್ರೀ ಮಾಧ್ವ ಕಾಣ್ವ ಮಠ
. ಶ್ರೀ ಕುಂದಾಪುರ ವ್ಯಾಸರಾಜ ಮಠದಿಂದ - ಶ್ರೀ ಸಾಗರಕಟ್ಟೆ ವ್ಯಾಸರಾಜ ಮಠ

ಗೌಡ ಸಾರಸ್ವತ ಮಾಧ್ವ ಮಠಗಳು

೧. ಶ್ರೀ ಕಾಶಿ ಮಠ
೨. ಶ್ರೀ ಪರ್ತಗಾಳಿ ಜೀವೋತ್ತಮ ಮಠ