Wednesday, March 28, 2012

"ಅಭಿಮಾನಿ" ಹಾಗು "ನಿಯಾಮಕ" ಪದಗಳ ವ್ಯತ್ಯಾಸ

ನಮಗೆ ಎರಡೂ ಪದಗಳ ಪರಿಚಯ ಬಹಳಷ್ಟುಇದೆ.
ಆದರೆ ಅವುಗಳ ಅರ್ಥದಲ್ಲಿ ಗೊಂದಲವೂ ಇದ್ದೇ ಇದೆ.

ಬನ್ನಿ ಎರಡು ಪದಗಳ ಅರ್ಥ ತಿಳಿಯಲು ಸ್ವಲ್ಪ ಪ್ರಯತ್ನಿಸೋಣ.

ಒಂದು ವಸ್ತುವು ಒಬ್ಬ ವ್ಯಕ್ತಿಯ ಹತೋಟಿಯಲ್ಲಿದ್ದು, ವ್ಯಕ್ತಿಯು ಮತ್ತೊಬ್ಬರ ಹತೋಟಿಯಲ್ಲಿದ್ದರೆ, ಅಂತಹ ವ್ಯಕ್ತಿಯನ್ನು ವಸ್ತುವಿಗೆ "ಅಭಿಮಾನಿ" ಎಂದು ಕರೆಯಬಹುದು.

ಒಂದು
ವಸ್ತುವನ್ನು ತನ್ನ ಹತೋಟಿಯಲ್ಲಿಟ್ಟುಕೊಂಡು, ವ್ಯಕ್ತಿಯು ಮತ್ತಾರ ಹತೋಟಿಯಲ್ಲೂ ಇಲ್ಲದಿದ್ದರೆ ಅಂತಹ ವ್ಯಕ್ತಿಯನ್ನು "ನಿಯಾಮಕ" ಎಂದು ಕರೆಯಬಹುದು.

ಇದಕ್ಕೆ ಲೌಕಿಕ ಉದಾಹರಣೆ ನೋಡುವುದಾದರೆ.
ನಮ್ಮ ಮನೆಗಳಿಗೆ ಹಾಲಿನ ತೊಟ್ಟೆ (Packet) ಹಾಕುವವನು "ಅಭಿಮಾನಿ" ಹಾಗು ಹಾಲು ಉತ್ಪಾದನಾ ಸಂಘದ ಮಾಲೀಕ "ನಿಯಾಮಕ"
ಹಾಲಿನ ತೊಟ್ಟೆಯು, ಅದನ್ನು ನಮ್ಮ ಮನೆಗಳಿಗೆ ತಲುಪಿಸುವವನ ಆಧೀನದಲ್ಲಿದ್ದರೂ ಅವನು ತನ್ನ ಮೇಲಧಿಕಾರಿಯ ಆಧೀನ ಹಾಗಾಗಿ ಅವನು ತೊಟ್ಟೆಗೆ "ಅಭಿಮಾನಿ" ಮಾತ್ರ.
ಆದರೆ ಸಂಘದ ಮಾಲೀಕ "ನಿಯಾಮಕ" ಏಕೆಂದರೆ ಹಾಲಿನ ತೊಟ್ಟೆಯೂ ಅವನ ಆಧೀನ ಹಾಗು ತೊಟ್ಟೆಯನ್ನು ಮನೆ ಮನೆಗೆ ಹಾಕುವ ವ್ಯಕ್ತಿಯೂ ಅವನ ಆಧೀನ.





No comments:

Post a Comment