Saturday, March 24, 2012

ತಿಳಿದಷ್ಟು ಪೇಳುವೆ ಮಧ್ವರ ಕಥೆ - ೧

ಕಲಿಕಾಲದ ಪ್ರಭಾವದಿಂದಾಗಿ "ಜ್ನಾನಸೂರ್ಯ" ಅಸ್ತಮಿಸಲು ಪ್ರಾರಂಭಿಸಿದ.
ಜಗತ್ತಿನಲ್ಲೆಲ್ಲಾ ತತ್ವವಿಲ್ಪವವುಂತಾಯಿತು.
ಹರಿಸರ್ವೂತಮತ್ವವನು ಅಲ್ಲಗೆಳೆಯುವವರು ಕೆಲವರು. ಹರಿಯೂ ಹರನೂ ಒಂದೇ ಎನ್ನುವವರು ಕೆಲವರು. ಹರನೇ ಸರ್ವೋತ್ತಮ ಎಂಬುವವರು ಕೆಲವರು. ನಾನೂ ದೇವರೂ ಒಂದೇ ಎನ್ನುವವರು ಕೆಲವರು. ಕೆಲವೊಮ್ಮೆ ನಾನೂ ದೇವರೂ ಒಂದೆ ಕೆಲವೊಮ್ಮೆ ಬೇರೆ ಬೇರೆ ಎನ್ನುವವರು ಕೆಲವರು, ಹೀಗೇ . . .
ಇದರ ಪ್ರಭಾವದಿಂದಾಗಿ ಸಜ್ಜನರು ಸನ್ಮಾರ್ಗವನ್ನು ಬಿಟ್ಟು ದುರ್ಮಾರ್ಗಿಗಳಾಗಲು ಪ್ರಾರಂಭಿಸಿದರು.
ಸಜ್ಜನರ ಪರಿಸ್ಥಿತಿಯನ್ನು ಕಂಡು ವ್ಯಥೆಗೊಂಡ ದೇವತೆಗಳು ಕ್ಷೀರಸಾಗರದತ್ತ ಹೊರಟರು.
ತಮ್ಮ ಅಳಲನ್ನು ಭಗವಂತನ ಬಳಿ ನಿವೇದಿಸಿಕೊಂಡರು.

ಭಗವಂತ ತ್ರಿಯುಗ. ಆತ ಮೂರೂ ಯುಗಗಳಲ್ಲಿ ಮಾತ್ರ ಅವತಾರ ಮಾಡುವವನು.
ಹಾಗಾಗಿ ಸಜ್ಜನರ ಉದ್ಧಾರಕ್ಕಾಗಿ ತಾನು ಅವತರಿಸಲಿಚ್ಚಿಸಲಿಲ್ಲ.
ಇನ್ನು ಚತುರ್ಮುಖನಿಗಂತು ಭೂಲೋಕದಲ್ಲಿ ಅವತಾರವೇ ಇಲ್ಲ. ಹಾಗಾಗಿ ಅವನನ್ನೂ ಅಜ್ಞಾಪಿಸಲಿಲ್ಲ.

ಮತ್ತೊಂದು ಯೋಚಿಸದೆ ಶ್ರೀ ಹರಿಯು, ವಹಿಸಿಕೊಟ್ಟ ಕಾರ್ಯವನ್ನು ಚೆನ್ನಾಗಿ ಮಾಡುವವನೂ, ಸರ್ವಜ್ನನೂ ಆದ
ಶ್ರೀಮುಖ್ಯಪ್ರಾಣನನ್ನು ಸಜ್ಜನರ ಉದ್ಧಾರಕ್ಕಾಗಿ ಭೂಲೋಕದಲ್ಲಿ ಅವತರಿಸುವಂತೆ ಆಜ್ಞಾಪಿಸಿದ.

ಹೀಗೆ ತನ್ನ ಸ್ವಾಮಿಯಾದ ಶ್ರೀ ಹರಿಯಿಂದ ಆಜ್ಞಪ್ತನೂ ಇತರ ದೇವತೆಗಳಿಂದ ಪ್ರಾರ್ಥಿತನೂ ಆದ ಶ್ರೀ ಮುಖ್ಯಪ್ರಾಣನು ಭೂಲೋಕದಲ್ಲಿ ಮಧ್ವಾಚರ್ಯರಾಗಿ ಅವತರಿಸಿದ.

ಕಥಾ ಭಾಗವನ್ನು ಓದುವುದರಿಂದ ಅತಿ ಶೀಘ್ರದಲ್ಲಿಯೇ ನಮ್ಮೆಲ್ಲರ ಹೃದಯದಲ್ಲಿ ಮುಖ್ಯಪ್ರಾಣನು ಅವತರಿಸಿ ನಮ್ಮೆಲ್ಲರ ಕಲಿಮಲಕಲುಷವನ್ನು ಪರಿಹರಿಸುತ್ತಾನೆ.
(ಮುಂದುವರೆಯಲಿದೆ . . . )

No comments:

Post a Comment