ಜಗದ್ಗುರು ಶ್ರೀಮನ್ಮಧ್ವಾಚಾರ್ಯರು ಉಡುಪಿಯಲ್ಲಿ ರುಕ್ಮಿಣೀ ಕರಾರ್ಚಿತ ಬಾಲ ಕೃಷ್ಣನ ವಿಗ್ರಹವನ್ನು ಪ್ರತಿಷ್ಠಾಪಿಸಿ,
ಶ್ರೀಕೃಷ್ಣನ ಪೂಜೆಯನ್ನು ಅವಿಚ್ಛಿನ್ನವಾಗಿ ನಡೆಸಲು ಎಂಟು ಮಂದಿ ಬಾಲವಟುಗಳಿಗೆ ಸನ್ಯಾಸಾಶ್ರಮ ನೀಡಿದರು.
ಅ ಎಂಟು ಮಂದಿಯಿಂದ ಮುಂದುವರೆದ ಪರಂಪರೆಯೇ ಇಂದು ಅಷ್ಟ ಮಠಗಳು ಎಂದು ಪ್ರಸಿದ್ಧಿ ಹೊಂದಿವೆ. ಅವು:
೧. ಶ್ರೀ ಪಲಿಮಾರು ಮಠ
೨. ಶ್ರೀ ಅದಮಾರು ಮಠ
೩. ಶ್ರೀ ಕೃಷ್ಣಾಪುರ ಮಠ
೪. ಶ್ರೀ ಪುತ್ತಿಗೆ ಮಠ
೫. ಶ್ರೀ ಶೀರೂರು ಮಠ
೬. ಶ್ರೀ ಸೋಂದ ಮಠ
೭. ಶ್ರೀ ಕಾಣಿಯೂರು ಮಠ
೮. ಶ್ರೀ ಪೇಜಾವರ ಮಠ
ಶ್ರೀ ಮಧ್ವಾಚಾರ್ಯರ ಆಶ್ರಮ ಗುರುಗಳಾದ ಶ್ರೀ ಅಚ್ಯುತಪ್ರೇಕ್ಷಾಚಾರ್ಯರಿಂದ ಸನ್ಯಾಸಾಶ್ರಮ ಸ್ವೀಕರಿಸಿ ಮಧ್ವ ಮತಾನುಯಾಯಿಗಳಾದ ಶ್ರಿಸತ್ಯತೀರ್ಥರಿಂದ ಮುಂದುವರೆದ ಪರಂಪರೆ :
೧. ಶ್ರೀ ಭಂಡಾರಕೇರಿ ಮಠ
೨. ಶ್ರೀ ಭೀಮನಕಟ್ಟೆ ಮಠ
ಇನ್ನು ಶ್ರೀಮಧ್ವರು ದ್ವೈತ ಮತ ಪ್ರಸಾರಕ್ಕಾಗಿ ಸನ್ಯಾಸಾಶ್ರಮ ನೀಡಿದ ಶ್ರೀ ಪದ್ಮನಾಭತೀರ್ಥರಿಂದ ಮುಂದುವರೆದ ಪರಂಪರೆಯಿಂದ ಮುಂದುವರೆದ ಪರಂಪರೆ :
೧. ಶ್ರೀ ಶ್ರೀಪಾದರಾಜ ಮಠ
೨. ಶ್ರೀ ಸೋಸಲೆ ವ್ಯಾಸರಾಜ ಮಠ
೩. ಶ್ರೀ ಮಧವತೀರ್ಥ ಮಠ (ಮಜ್ಜಿಗೆಹಳ್ಳಿ ಮಠ / ತಂಬಿಹಳ್ಳಿ ಮಠ )
೪. ಶ್ರೀ ಕೂಡ್ಲಿ ಆರ್ಯ ಅಕ್ಷೋಭ್ಯತೀರ್ಥ ಮಠ
೫. ಶ್ರೀ ಬಾಳಗಾರು ಆರ್ಯ ಅಕ್ಶೋಭ್ಯತೀರ್ಥ ಮಠ
೮. ಶ್ರೀ ರಾಘವೇಂದ್ರ ಮಠ
೯. ಶ್ರೀ ಉತ್ತರಾದಿ ಮಠ
೧೦. ಶ್ರೀ ಕುಂದಾಪುರ ವ್ಯಾಸರಾಜ ಮಠ
ಕವಲೊಡೆದು ನಿರ್ಮಿತವಾದ ಇನ್ನಿತರ ಮಾಧ್ವ ಮಠಗಳು
೧. ಶ್ರೀ ಸುಬ್ರಹ್ಮಣ್ಯ ಮಠ (ಕುಕ್ಕೆ)
2. ಶ್ರೀ ಪೇಜಾವರ ಮಠದಿಂದ - ಶ್ರೀ ಚಿತ್ರಾಪುರ ಮಠ
3. ಶ್ರೀ ಕಾಣಿಯೂರು ಮಠದಿಂದ - ಶ್ರೀ ಮಾಧ್ವ ಕಾಣ್ವ ಮಠ
೪. ಶ್ರೀ ಕುಂದಾಪುರ ವ್ಯಾಸರಾಜ ಮಠದಿಂದ - ಶ್ರೀ ಸಾಗರಕಟ್ಟೆ ವ್ಯಾಸರಾಜ ಮಠ
ಗೌಡ ಸಾರಸ್ವತ ಮಾಧ್ವ ಮಠಗಳು
೧. ಶ್ರೀ ಕಾಶಿ ಮಠ
೨. ಶ್ರೀ ಪರ್ತಗಾಳಿ ಜೀವೋತ್ತಮ ಮಠ
No comments:
Post a Comment